ಥ -
ಕನ್ನಡ ವರ್ಣಮಾಲೆಯಲ್ಲಿ ತ ವರ್ಗದ ಎರಡನೆಯ ಅಕ್ಷರ. ಮಹಾಪ್ರಾಣ. ಬ್ರಾಹ್ಮೀಲಿಪಿಯಲ್ಲಿದು ಒಂದು ವೃತ್ತವಾಗಿ ನಡುಬಿಂದುವಿನೊಡನೆ ಕಾಣಿಸಿಕೊಳ್ಳುತ್ತದೆ. ಕದಂಬರ ಕಾಲಕ್ಕೆ ಆಯಾಕಾರವಾಗುತ್ತದೆ. ಗಂಗರ ಕಾಲಕ್ಕೆ ಆಯಾಕಾರದ ತಳದಲ್ಲಿ ಹೊಕ್ಕಳು ಕಾಣಿಸಿಕೊಳ್ಳತ್ತದೆ. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಅಸ್ಪಷ್ಟವಾಗಿ ಕಾಣತೊಡಗಿದ ತಲೆಕಟ್ಟು ಮುಂದಿನ ಎರಡು ಶತಮಾನಗಳಲ್ಲಿ ಸುಸ್ಪಷ್ಟವಾಗುತ್ತದೆ. ವಿಜಯನಗರದ ಕಾಲದಲ್ಲಿ ಹೊಕ್ಕಳು ಸೀಳಿರುವುದನ್ನು ಗಮನಿಸಬೇಕು. ಅಂದಿಗೆ ಈ ಅಕ್ಷರಕ್ಕೆ ಇಂದಿನ ರೂಪ ಸಿದ್ಧಿಸಿದಂತಾಯಿತು. ಮುಂದೆ ಇದೇ ರೂಪ ನಡೆದು ಬಂದಿದೆ.					
	(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ